ಸಿನಬಾರ್
	ಪಾದರಸದ ವಾಣಿಜ್ಯೋತ್ಪಾದನೆಯ ಪ್ರಧಾನ ಅದಿರು, ಮಕ್ರ್ಯುರಿಕ್ ಸಲ್ಫೈಡ್ ಎಂಬ ಖನಿಜ. ಇದನ್ನು ರಸಸಿಂಧೂರ ಎಂದು ಕರೆಯುತ್ತಾರೆ. ಅಣುಸೂತ್ರ: ಊgS. ಬಣ್ಣದ ವ್ಯಾಪ್ತಿ: ಕಡುಗೆಂಪಿನಿಂದ ಕಂದುಮಿಶ್ರಿತ ಬೂದು. ಹೊಳಪು: ವಜ್ರದಿಂದ ಲೋಹೀಯ ತನಕ. ಮೋ ಕಾಠಿಣ್ಯಾಂಕ: 2-2.5. ಸಾಪೇಕ್ಷ ಸಾಂದ್ರತೆ: 8.1. ಹ್ಯಾಬಿಟ್ ಅಥವಾ ರೂಪ: ಭಾರವಾದ ರ್ಹೋಂಬೊಹಿಡ್ರಲ್ ಫಲಕ ಅಥವಾ ಅಶ್ರಗ ಸ್ಫಟಿಕ. ಮುರಿತ ಅಥವಾ ಸೀಳಿಕೆ: ಒಂದು ಪರಿಪೂರ್ಣ ಸೀಳಿಕೆ. ಸ್ಫಟಿಕ ವ್ಯವಸ್ಥೆ: ಷಷ್ಠಭುಜ.

	ಇದು ಸಾಪೇಕ್ಷವಾಗಿ ವಿರಳ ಲಭ್ಯ. ಸಾಮಾನ್ಯವಾಗಿ ಬಹಳ ಹಿಂದಿನದಲ್ಲದ ಜ್ವಾಲಾಮುಖಿಜ ಶಿಲೆ ಮತ್ತು ಬಿಸಿ ಚಿಲುಮೆ ನಿಕ್ಷೇಪಗಳಲ್ಲಿ ಪೈರೈಟ್, ಸ್ಟಿಬ್ನೈಟ್ ಮತ್ತು ಮಾರ್ಕಸೈಟ್‍ಗಳೊಂದಿಗೆ ಸಿರಗಳ (ವೆಯ್ನ್) ರೂಪದಲ್ಲಿ ಲಭ್ಯ. ಸು. 2000 ವರ್ಷಗಳಿಂದಲೂ ಗಣಿಗಾರಿಕೆ ಮಾಡುತ್ತಿರುವ ಸ್ಪೇನಿನ ಆಲ್ಮಡೆನ್ ಎಂಬಲ್ಲಿ ಇರುವ ನಿಕ್ಷೇಪವೇ ಈ ಖನಿಜದ ಪ್ರಮುಖ ಆಕರ. ಇಟಲಿ, ಮೆಕ್ಸಿಕೊ, ಅಮೆರಿಕ, ಯೂಗೋಸ್ಲಾವಿಯ, ಚೀನ ಮತ್ತು ರಷ್ಯ ದೇಶಗಳಲ್ಲಿಯೂ ಲಭ್ಯ.

	ಗಂಧಕ ಮತ್ತು ಪಾದರಸಗಳ ಮಿಶ್ರಣದಿಂದ ತಯಾರಿಸಿದ ಕೃತಕ ರಸಸಿಂಧೂರವೇ ಭಾರತೀಯರು ಮಂಗಳದ್ರವ್ಯವೆಂದು ಪರಿಗಣಿಸುವ ಕುಂಕುಮಕೇಸರಿ ಬಣ್ಣದ ಸಿಂಧೂರ (ವರ್ಮಿಲ್ಯನ್).				
		(ಎಮ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ